ಸಸ್ಯ ಶ್ಯಾಮಲಾ ಅಭಿಯಾನ: ಸಾವಿರ ಸಸಿ ನೆಡುವ ಯೋಜನೆ ಸಂಪನ್ನ

ಸಸ್ಯಶ್ಯಾಮಲಾ 2026 ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಮಾರಿಗುಡಿ ಪರಿಸರದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರ ವಾರ್ಷಿಕ ಸಾವಿರ ಸಸಿ ಗಳನ್ನು ನೆಡುವ ಸಸ್ಯ ಶ್ಯಾಮಲಾ ಅಭಿಯಾನ-2026 ಸಂಪನ್ನಗೊಂಡಿತು. ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ರಶ್ಮಿತಾ ಜೈನ್, ವಾರ್ಷಿಕ ವಾಗಿ ಸಾವಿರ ಸಸಿಗಳನ್ನು ನೆಡುವ ಬೃಹತ್ ಅಭಿಯಾನಕ್ಕೆ ಸ್ಥಳೀಯರ ಬೆಂಬಲವನ್ನು ಅವರು ಪ್ರಶಂಸಿಸಿದರು. ಪರ್ಯಾವರಣ್ ಸಂರಕ್ಷಣಾ ಗತಿ ವಿಧಿ ದಕ್ಷಿಣ ಕರ್ನಾಟಕದ ಸಂಯೋಜಕ ವೆಂಕಟೇಶ್ ಸಂಗನಲ್ ಯೋಜನೆಯನ್ನು ಶ್ಲಾಘಿಸಿದರು. ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ, ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ಹೇಳಿದರು. ಸಿವಿಲ್ ಇಂಜಿನಿಯರ್ ಮತ್ತು ದಕ್ಷಿಣ ಕರ್ನಾಟಕ ತ್ಯಾಜ್ಯ ನಿರ್ವಹಣೆ ಇಲಾಖೆಯ ಸಂಯೋಜಕ ಕೇಶವ ಎಚ್.ಕೆ., ಪರ್ಯಾವರಣ್ ಸಂಸ್ಥೆಯ ಮಂಗಳೂರು ವಿಭಾಗದ ಸಹ ಸಂಯೋಜಕ ಮಂಜುನಾಥ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಎನ್ಎಸ್ಎಸ್ ಅಧಿಕಾರಿ ಅಶೋಕ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವರೂಪ್ ಜೈನ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪ ಮುಖ್ಯ ಶಿಕ್ಷಕ ಜಯಶೀಲ್ ನಿರೂಪಿಸಿ, ವಂದಿಸಿದರು.

Click here to View All