ಸಂಜೀವಿನಿ ಗೋಧಾಮಕ್ಕೆ ಶೈಕ್ಷಣಿಕ ಭೇಟಿ

ಪ್ರಕೃತಿಯೊಂದಿಗೆ ಸಮಯ - ಮೌಲ್ಯಗಳ ಅರಿವು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಮುನಿಯಾಲಿನಲ್ಲಿರುವ ಸಂಜೀವಿನಿ ಗೋಧಾಮಕ್ಕೆ ಎಕ್ಸಲೆಂಟ್ ಸಂಸ್ಥೆಯ 6ನೇ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳ ಭೇಟಿ ನೀಡುವುದರ ಮೂಲಕ ರಜಾ ಅವಧಿಯನ್ನು ಸದುಪಯೋಗ ಪಡೆದುಕೊಂಡು, ಗೋವುಗಳು, ವಿವಿಧ ಪ್ರಾಣಿ -ಪಕ್ಷಿಗಳು, ಜಲಚರಗಳು ಹಾಗೂ ಸಾವಯವ ಕೃಷಿಯ ನಡುವೆ ಸುಮಾರು ಎರಡು ಗಂಟೆಗಳ ಕಾಲ ಮಕ್ಕಳು ಪ್ರಕೃತಿಯೊಂದಿಗೆ ಸಮಯ ಕಳೆದರು. ಈ ಭೇಟಿ ಮಕ್ಕಳಿಗೆ ಪ್ರಕೃತಿ, ಪರಿಸರ ಮತ್ತು ಜೀವ ಜಗತ್ತಿನೊಂದಿಗೆ ನೇರವಾಗಿ ಬೆರೆಯುವ ಅಮೂಲ್ಯ ಅನುಭವವನ್ನು ನೀಡಿತು.

Click here to View All