ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆ ಮತ್ತು ೨೨೫ ಕಿ.ವ್ಯಾಟ್ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನಾ ಸಮಾರಂಭ.

ಅಂಕದ ಜೊತೆಗೆ ಮಾನವೀಯ ಗುಣ ಹೊಂದಿರುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಆಗ ಸಮಾಜ ತಮ್ಮನ್ನು ಗುರುತಿಸುತ್ತದೆ. ಎಲ್ಲಾ ವಿದ್ಯಾರ್ಥಿಗಳಲ್ಲಿ ಉನ್ನತ ಸಾಧನೆ ಮಾಡುವ ಅರ್ಹತೆ ಇರುತ್ತದೆ. ಬದ್ಧತೆಯಿಂದ ಶ್ರಮವಹಿಸಿ ಕೆಲಸ ಮಾಡಿದಾಗ ಕನಸುಗಳ ಈಡೇರಿಕೆ ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ ಸಂಸ್ಥಾಪಕರಾದ ತೇಜಸ್ವಿನಿ ಅನಂತಕುಮಾರ್ ಸೋಲಾರ್ ಘಟಕವನ್ನು ಉದ್ಘಾಟಿಸಿ ಎಕ್ಸಲೆಂಟ್ ಸಂಸ್ಥೆಯ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಯು.ಟಿ. ಖಾದರ್ ಮತ್ತು ತೇಜಶ್ವಿನಿ ಅನಂತ್‌ಕುಮಾರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ಯುವಿಕ ಭಾಗವಹಿಸಿದ ಮೌಲ್ಯ ವೈ.ಆರ್. ಜೈನ್, ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಪಡೆದ ಗುಣಸಾಗರ ಡಿ., ಭಾರ್ಗವಿ ಎಂ.ಜಿ. ಸೇರಿದಂತೆ ಹತ್ತಾರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿದ್ಯಾರ್ಥಿವೇತನದೊಂದಿಗೆ ಅಭಿನಂದಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ರಾಜ್ಯದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆ ಕುಲದೀಪ್ ಎಂ. ಅತಿಥಿಗಳಾಗಿ ಭಾಗವಹಿಸಿದ್ದರು. ಎಕ್ಸಲೆಂಟ್ ಸಂಸ್ಥಾಪಕರಾದ ಯುವರಾಜ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೨ ವರ್ಷಗಳಲ್ಲಿ ಸಂಸ್ಥೆಯ ಬೆಳವಣಿಗೆ ವಿದ್ಯೆಗೆ ನೀಡಲಾಗುವ ಮಹತ್ವ ತಿಳಿಸಿದರು.ಕಾರ್ಯದರ್ಶಿ ರಶ್ಮಿತಾ ಯುವರಾಜ್ ರೂಪಿಸಿದ ಸಸ್ಯಶ್ಯಾಮಲ ಯೋಜನೆಯ 1000 ಗಿಡ ನಾಟಿ ಕಾರ್ಯಕ್ರಮವನ್ನು ತಿಳಿಸಿದರು. ವಿಕ್ರಮ್ ನಾಯಕ್, ರೇಣುಕಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಸಿಬಿಎಸ್‌ಇ ಪ್ರಾಂಶುಪಾಲ ಸುರೇಶ್, ಎಕ್ಸಲೆಂಟ್ ಪ್ರೌಢಶಾಲಾ ಪ್ರಾಂಶುಪಾಲ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.

Click here to View All