ಸ್ಪೂರ್ತಿ ಸ್ಪೆಷಲ್ ಸ್ಕೂಲ್ ಮೂಡಬಿದ್ರೆ ಭೇಟಿ - 2-Jan 2023

ಜನವರಿ 2, 2023 : ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ವಾರ್ಷಿಕೋತ್ಸವ ಸಂದರ್ಭ ಆಯೋಜನೆಗೊಂಡ ಅಹಾರ ಮಳಿಗೆಯ ಲಾಭಾಂಶದ ಒಂದು ಭಾಗವನ್ನು ಮೂಡಬಿದ್ರೆಯ ಸ್ಪೂರ್ತಿ ಸ್ಪೆಷಲ್ ಸ್ಕೂಲ್ ಇಲ್ಲಿಯ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಭೋಜನದ ವ್ಯವಸ್ಥೆಗೆ ಬಳಸಲಾಯಿತು. ಈ ಸಂಸ್ಥೆಗೆ ಭೇಟಿ ನೀಡಿದ ಕಾಲೇಜಿನ ಒಟ್ಟು 27 ವಿದ್ಯಾರ್ಥಿಗಳು ವಿಶೇಷ ಚೇತನ ಮಕ್ಕಳ ಜೊತೆ ಕಾಲ ಕಳೆದರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಶೆಟ್ಟಿಗಾರ್ ಇವರು ಕಾಲೇಜು ಮಕ್ಕಳ ಈ ಸಾಮಾಜಿಕ ಸೇವೆಯನ್ನು ಅಭಿನಂದಿಸಿದರು. ಎಕ್ಸಲೆಂಟ್ ಸಂಸ್ಥೆಯ ಉಪನ್ಯಾಸಕರಾದ ಪ್ರಶಾಂತ್ ಹಾಗೂ ಪ್ರದೀಪ್ ಉಪಸ್ಥಿತರಿದ್ದರು.