ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಮೂಡುಬಿದಿರೆ: ಬೆಳಗೊಳದ ಬೆಳಗು, ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ , ಮಾತಾಡಿ ಆಧ್ಯಾತ್ಮ, ಧಾರ್ಮಿಕ , ಸಾಂಸ್ಕೃತಿಕ , ಶೈಕ್ಷಣಿಕ ಲೋಕದ ಸಂತ ಶಿರೋಮಣಿಯಾದ ಪೂಜ್ಯರ ಅಗಲುವಿಕೆ ಬಲು ದೊಡ್ಡ ನಷ್ಟವನ್ನುಂಟು ಮಾಡಿದೆ. ಅವರ ಆತ್ಮ ಜ್ಯೋತಿ ತೋರಿದ ಬೆಳಕಲ್ಲಿ ನಾವು ಪಥಿಕರಾಗೋಣ ಎಂದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ದೀನರ ಬದುಕಿಗೆ ಬೆಳಕಾಗಿ ಜೈನ ಧರ್ಮದ ಶ್ರೇಷ್ಠ ಸಂತರಾಗಿ ಆದರ್ಶಗಳ ತುತ್ತತುದಿಯಾಗಿ ಬದುಕಿದ ಪೂಜ್ಯ ಸ್ವಾಮೀಜಿ ಸೋಲರಿಯದ ಚೈತನ್ಯಕ್ಕೊಂದು ಪ್ರತಿಮೆ ಎಂದರು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶಿವಪ್ರಸಾದ್ ಭಟ್, ನೀಟ್ ಸಂಯೋಜಕರಾದ ಡಾ| ಪ್ರಶಾಂತ್ ಹೆಗ್ಡೆ , ಪೆÇ್ರ|, ಪುಷ್ಪರಾಜ್ ಹಾಗೂ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ನಿರೂಪಿಸಿ ವಂದಿಸಿದರು.