High School Students Won Southern Science Fair at Trissur

Excellent High School Students Won 1st prize in state at the Southern Science Fair 2023 held at Trissur in January 2023. Aprameya Bhat and Adithya R P of 9th std had presented a project on Fuel Theft Indicator guided by faculty Mr Niranjan Poojary

ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನ - ರಾಜ್ಯ ವಿಭಾಗದಲ್ಲಿ ಎಕ್ಸಲೆಂಟ್ ಪ್ರಥಮ: ಸಾಂಸ್ಕೃತಿಕ ಸಚಿವಾಲಯ ಭಾರತ ಸರ್ಕಾರದ ಆಯೋಜನೆಯಲ್ಲಿ ಕೇರಳದ ತ್ರಿಶೂರ್ ನಗರದಲ್ಲಿ ಜನವರಿ 28ರಿಂದ 31gತÀನಕ ನಡೆದ ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕರ್ನಾಟಕದ ಮೂಡಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಆದಿತ್ಯ ಆರ್ ಪುಣಿಚಿತ್ತಾಯ ಮತ್ತು ಅಪ್ರಮೇಯ ಭಟ್ ಹಾಗೂ ವಿಜ್ಞಾನ ಶಿಕ್ಷಕರಾದ ನಿರಂಜನ್ ಆರ್ ಪೂಜಾರಿ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದÀ ಇಂಧನ ಕಳ್ಳತನ ಪತ್ತೆ ಮಾಡುವ ಯಂತ್ರ ಎನ್ನುವ ವಿಜ್ಞಾನ ಮಾದರಿಗೆ ಕರ್ನಾಟಕ ರಾಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಬೋಧಕ, ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.