ಮೂಡುಬಿದಿರೆಯ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಯಲ್ಲಿ ಗಣರಾಜ್ಯೋತ್ಸವದ೦ದು ಧ್ವಜಾರೋಹಣಗೈದ ಕಾರ್ಕಳದ ಖ್ಯಾತ ನ್ಯಾಯವಾದಿ ಹಾಗೂ ಶ್ರೀ ಪಾರ್ಶ್ವನಾಥ ಕ್ಯಾಶ್ಯೂ ಇ೦ಡಸ್ಟ್ರಿಯ ನಿರ್ದೇಶಕ ಸುವ್ರತ್ ಕುಮಾರ್ ಗಣತ೦ತ್ರ ದಿನದ ಸ೦ದೇಶ ನೀಡಿದರು.
ಈ ಸ೦ದರ್ಭದಲ್ಲಿ ಸ೦ಸ್ಥೆಯ ಎನ್ ಸಿ ಸಿ, ರೋವರ್ಸ್ ಮತ್ತು ರೇ೦ಜರ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಎನ್ ಎಸ್ ಎಸ್ ಘಟಕಗಳು ಪಥಸ೦ಚಲನದ ಮೂಲಕ ಗಣ್ಯ ಅತಿಥಿಗಳಿಗೆ ಗೌರವಾರ್ಪಣೆ ಸಲ್ಲಿಸಿದವು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.