ಕಾಲೇಜಿನ ಎನ್ ಸಿ ಸಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್ ಸಿ ಸಿ ವತಿಯಿಂದ ಕರಿಂಜೆಯ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಕ್ಟೊಬರ್ 15 ರಂದು ನಡೆಯಿತು. ಕ್ಷೇತ್ರದ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವದಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಎನ್ ಸಿ ಸಿ ಅಧಿಕಾರಿ ಶ್ರೀ ಮಹೇಂದ್ರ ಜೈನ್ , ವಸತಿ ನಿಲಯದ ಶಿಸ್ತು ಪಾಲನಾ ಅಧಿಕಾರಿ ಶ್ರೀ ಹರೀಶ್ ಉಪಸ್ಥಿತರಿದ್ದರು.