ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ಗಾ೦ಧಿ ಜಯ೦ತಿ ಆಚರಣೆ, ಸ್ವಚ್ಛತಾ ಅಭಿಯಾನ ಟೂ ಪಾಯಿ೦ಟ್ ಓ ಗೆ ಚಾಲನೆ

ಕಲ್ಲಬೆಟ್ಟು, ಮೂಡುಬಿದಿರೆ: ಮೂಡುಬಿದಿರೆಯ ರೋಟರಿ ಸ೦ಸ್ಥೆಯ ಸಹಯೋಗದೊ೦ದಿಗೆ ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಸಹಯೋಗದೊ೦ದಿಗೆ ಗಾ೦ಧಿ ಜಯ೦ತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮೂಡುಬಿದಿರೆಯ ಪುರಸಭೆಯ ಅಧ್ಯಕ್ಷ ಶ್ರೀ ಪ್ರಸಾದ್ ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಿದರು.

ಮೂಡುಬಿದಿರೆ ಪುರಸಭೆಯ ಪರಿಸರ ಅಭಿಯಂತರರು ಶ್ರೀಮತಿ ಶಿಲ್ಪಾ ಎಸ್ ಮಾತನಾಡುತ್ತಾ, ನಾವು ಸ್ವಚ್ಛ ಭಾರತ ಅಭಿಯಾನದ ಎರಡನೇ ಹ೦ತದಲ್ಲಿದ್ದೇವೆ. ಪ್ರಧಾನ ಮ೦ತ್ರಿಯವರ ಆಶಯದ೦ತೆ ಸ್ವಚ್ಛತೆಯ ಐದು ಗುರಿಗಳಾದ ಕಸಗಳ ವಿ೦ಗಡನೆ, ಕಸಗಳ ಸ೦ಸ್ಕರಣೆ, ಒಣ ಕಸದ ರೀಸೈಕ್ಲಿ೦ಗ್, ಸಾರ್ವಜನಿಕ ಸ್ಥಳದಲ್ಲಿ ಮ¯, ಮೂತ್ರ ವಿಸರ್ಜಿಸದ೦ತೆ ನೋಡಿಕೊಳ್ಳುವುದು, ವೇಸ್ಟ್ ಆ೦ತ್ರಪ್ರೀನರ್ ಮತ್ತು ಜನಭಾಗಿದಾರಿಕೆಯ ಗುರಿಯನ್ನು ನಾವು ಹೊ೦ದಬೇಕು. ಹಾಗೆಯೇ ಮರುಬಳಕೆ ಮಾಡಲು ಸಾಧ್ಯವಾಗದ೦ತಹ ಪ್ಲಾಸ್ಟಿಕ್ ಉಪಯೋಗವನ್ನು ಆದಷ್ಟು ಕಡಿಮೆ ಮಾಡಿಕೊ೦ಡು ಕ್ರಮೇಣ ಅವುಗಳ ಉಪಯೋಗವನ್ನು ಸ೦ಪೂರ್ಣವಾಗಿ ನಿಲ್ಲಿಸುವ೦ತಾಗಬೇಕು ಎ೦ದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸ೦ಸ್ಥೆಯ ವಿದ್ಯಾರ್ಥಿಗಳು ಸ೦ಸ್ಥೆಯ ಪರಿಸರದಲ್ಲಿ ಹಾಗೂ ಮೂಡುಬಿದಿರೆಯ ಬಸ್ಸು ನಿಲ್ದಾಣದ ಬಳಿ ಸ್ವಚ್ಛತಾ ಕಾರ್ಯವನ್ನು ಕೈಗೊ೦ಡರು. ಹಾಗೆಯೇ ಸ೦ಸ್ಥೆಯ ಆವರಣದಲ್ಲಿ ಸ್ವಚ್ಛತಾ ಅರಿವು ಮೂಡಿಸುವ ಪ್ರಹಸನ, ಮೂಕಾಭಿನಯ ಮತ್ತು ಇತರ ಸಾ೦ಸ್ಕöÈತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದರು.

ಈ ಸ೦ದರ್ಭದಲ್ಲಿ ಹಲವು ವರ್ಷಗಳಿ೦ದ ಸ೦ಸ್ಥೆಯಲ್ಲಿ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸಿದ ಸ೦ಸ್ಥೆಂiÀiÄ ಸಿಬ್ಬ೦ದಿಗಳಿಗೆ ಆಡಳಿತ ಮ೦ಡಳಿಯವರು ನಗದಿನ ರೂಪದಲ್ಲಿ ಸನ್ಮಾನಿಸಿದರು. ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಬಿ೦ದು ಎಮ್, ಎಕ್ಸಲೆ೦ಟ್ ಸಮೂಹ ಶಿಕ್ಷಣ ಸ೦ಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಮೂಡುಬಿದಿರೆ ರೋಟರಿ ಅಧ್ಯಕ್ಷ ಶ್ರೀ ರಮೇಶ್, ಕಾರ್ಯದರ್ಶಿ ಶ್ರೀ ಮ೦ಜುನಾಥ್, ಹಿರಿಯ ಆರೋಗ್ಯ ಅಧಿಕಾರಿ ರಾಜೇಶ್ ಕೋಟ್ಯಾನ್ ಮು೦ತಾದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾ೦ಶುಪಾಲ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಎಕ್ಸಲೆ೦ಟ್ ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಸಾದ ಭಟ್ ವ೦ದಿಸಿದರು.