ಎಕ್ಸಲೆಂಟ್ ಮೂಡುಬಿದಿರೆ : ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ಕಲ್ಲಬೆಟ್ಟು ಮೂಡುಬಿದಿರೆ ಇಲ್ಲಿ ೨೦೨೦ರ ಸಾಲಿನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ ಸುರೇಂದ್ರಕುಮಾರ್ ಮತ್ತು ಅನಿತಾ ಸುರೇಂದ್ರಕುಮಾರ್ ದಂಪತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

೨೦೨೦ರ ಸಾಲಿನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಕಾಲೇಜಿಗ ಪ್ರಥಮ ಸ್ಥಾನ ಪಡೆದು ಪ್ರಸ್ತುತ ಪ್ರತಿಷ್ಠ್ಟಿತ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸಾಗರ ತಾಲೂಕಿನ ಶ್ರೀಮತಿ ಸತ್ಯವತಿ ಮತ್ತು ಜಿ ರಾಮಚಂದ್ರ ದಂಪತಿಗಳ ಪುತ್ರನಾದ ಶ್ರೇಯಸ್ ಜಿ ಆರ್(೬೬೦ ಅಂಕ)ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶಿವಮೊಗ್ಗದ ವಸುಮತಿ ಹೆಬ್ಬಾರ್ ಮತ್ತು ಪ್ರಕಾಶ್ ವಿ ಎಸ್ ದಂಪತಿಗಳ ಮಗಳಾದ ಸಹನಾ ವಿ ಪಿ (೬೫೩ ಅಂಕ) ಇವರನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಒಂದು ಲಕ್ಷ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಿ ಸುರೇಂದ್ರಕುಮಾರ್ ಇವರು ಸಮಾಜ ಗುರುತಿಸುವುದು ಮನುಷ್ಯನ ಶ್ರೀಮಂತಿಕೆಯನ್ನಲ್ಲ ಬದಲಾಗಿ ಉತ್ತಮ ಚಾರಿತ್ರ÷್ಯ ಹಾಗೂ ಸಂಸ್ಕಾರಭರಿತ ಶಿಕ್ಷಣದಿಂದÀ ಹಾಗೆಯೇ ಒಬ್ಬ ಒಳ್ಳೆಯ ಓದುಗ ಅತ್ಯುತ್ತಮ ನಾಯಕನಾಗಲು ಸಾಧ್ಯವಿದೆ ಎಂದು ನುಡಿದರು. ಎಕ್ಸಲೆಂಟ್ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಗುರುಕುಲ ಮಾದರಿಯಲ್ಲಿ ಶಿಕ್ಷಣ ಪಡೆಯುತ್ತಾ ಸಾಧನೆಯ ಶಿಖರ ಏರುತ್ತಿರುವುದು ಪ್ರಶಂಸÀನೀಯ ಎಂದರು. ಶ್ರೀಮತಿ ಅನಿತಾ ಸುರೇಂದ್ರಕುಮಾರ್ ಇವರು ಗುರುಗಳಿಂದಾಗಿ ವಿದ್ಯಾರ್ಥಿಗಳು, ಮಣ್ಣು ಹದವಾದಾಗ ಮಾತ್ರ ಮಡಿಕೆ ಸರಿಬರುವಂತೆ, ವಿದ್ಯಾರ್ಥಿಯ ತಪುö್ಪಗಳನ್ನು ತಿದ್ದಿದಾಗ ಮಾತ್ರ ಅವನ ಸಾಧನೆಗೆ ದಾರಿಯಾಗುತ್ತದೆ. ಎಕ್ಸಲೆಂಟ್ ಸಂಸ್ಥೆಯಿAದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಶಿಕ್ಷಣ ದೊರಕುತ್ತಿದೆ. ಸರಿದಾರಿ ತೋರಿದ ರೀತಿಯನ್ನು ಜೀವನದಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಇವರು ಕಠಿಣ ಪರಿಶ್ರಮದಿಂದ ಪ್ರಯತ್ನ ಪಟ್ಟರೆ ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು. ಜೆಇಇ ಸಂಯೋಜಕ ಪ್ರೊ ರಾಮಮೂರ್ತಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಇವರು ಸ್ವಾಗತಿಸಿದರು, ನೀಟ್ ಸಂಯೋಜಕÀ ಡಾ ಪ್ರಶಾಂತ್ ಹೆಗಡೆ ಸಾಧಕರನ್ನು ಪರಿಚಯಿಸಿದರು, ಡಾ ದಯಾನಂದ ಪಿ ಇವರು ವಂದಿಸಿದರು. ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿದರು.